ದಶಮಾನೋತ್ಸವ ಸಂಭ್ರಮ ಮತ್ತು ಆರಂಭಾವಸ್ಥೆಗೊಂದು ಯೋಗ ಪಥ ಪುಸ್ತಕ ಬಿಡುಗಡೆ.
- yogasreeiycinfo
- May 21, 2024
- 6 min read

ಯೋಗಶ್ರೀ ಅಯ್ಯಂಗಾರ್ ಯೋಗ ಕೇಂದ್ರವು ಆರಂಭವಾಗಿ ಹತ್ತು ವರ್ಷಗಳನ್ನು ಪೂರೈಸಿದೆ. ಈ ಶುಭ ಸಂದರ್ಭದಲ್ಲಿ “ಆರಂಭಾವಸ್ಥೆಗೊಂದು ಯೋಗ ಪಥ” ಪುಸ್ತಕವು ಬಿಡುಗಡೆಗೊಂಡಿದ್ದು ಇನ್ನೊಂದು ವಿಶೇಷವಾಗಿತ್ತು. ಈ ಯೋಗಕೇಂದ್ರದ ಸಂಸ್ಥಾಪಕರಾದ ಶ್ರೀ ವಿರೂಪಾಕ್ಷ ಡಾಣಿ ಅವರು ಅನುಭವಿ ಅಯ್ಯಂಗಾರ್ ಯೋಗಶಿಕ್ಷಕರಾಗಿದ್ದು, ಅವರು ಹತ್ತುವರ್ಷಗಳಿಂದ ಸತತವಾಗಿ ಯೋಗತರಗತಿಗಳನ್ನು ನಡೆಸಿಕೊಂಡು ಬಂದಿದ್ದಾರೆ. ಅವರ ಅನುಭವ ಸಾಕಷ್ಟು ಜನರು ಪ್ರಯೋಜನ ಪಡೆದಿದ್ದು, ಅದು ಇನ್ನೂ ಹೆಚ್ಚು ಜನರನ್ನು ತಲುಪಲು ಪುಸ್ತಕವು ಯೋಗ ಅಭ್ಯಾಸಿಗಳಿಗೆ ಒಂದು ಉತ್ತಮ ಕೈಗನ್ನಿಡಿಯಂತಿದೆ. ಕಾರ್ಯಕ್ರಮವು ಸಮಯ ನಿಗಧಿಯಂತೆ ಸಂಜೆ 5.30ಕ್ಕೆ ಆರಂಭವಾಯಿತು. ಯೋಗಕೇಂದ್ರದ ಎಲ್ಲಾ ಸಾಧಕರು ಅತ್ಯಂತ ಉತ್ಸಾಹದಿಂದ ಉತ್ತಮ ತಯಾರಿಯನ್ನು ಮಾಡಿದ್ದರು. ಸ್ವಚ್ಚತೆ, ಅಲಂಕಾರ, ವೇದಿಕೆ, ಎಲ್ಲರಿಗೂ ಕುಳಿತುಕೊಳ್ಳುವ ವ್ಯವಸ್ಥೆ, ಪುಸ್ತಕ ಬಿಡುಗಡೆಗೆ ತಯಾರಿ, ನಂತರ ಎಲ್ಲರಿಗೂ ಊಟದ ವ್ಯವಸ್ಥೆಯನ್ನು ಸಹ ಎಲ್ಲರೂ ಒಟ್ಟಾಗಿ ಒಂದೇ ಕುಟುಂಬದಂತೆ ತಯಾರಿ ಮಾಡಿದ್ದರು.

ಪೂರ್ವನಿಗಧಿಯಂತೆ ಸಮಯಕ್ಕೆ ಸರಿಯಾಗಿ ಕಾರ್ಯಕ್ರಮವನ್ನು ಆರಂಭಿಸಿದರು. ಕಾರ್ಯಕ್ರಮದ ನಿರ್ವಹಣೆಯನ್ನು ವಿಕ್ರಮ.ಕೆ ಮತ್ತು ಶ್ರೀನಿವಾಸ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಶ್ರೀ ರಾಜಶೇಖರ ಜೀ (ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರು) ಹಾಗೂ ಯೋಗಕೇಂದ್ರದ ಸಂಸ್ಥಾಪಕರು ಮತ್ತು ಲೇಖಕರಾದ ವಿರೂಪಾಕ್ಷ ಡಾಣಿ ಅವರುಗಳು ವೇದಿಕೆಯನ್ನು ಅಲಂಕರಿಸಿದರು. ದೀಪಪ್ರಜ್ವಲನದ ನಂತರ ಕೇಂದ್ರದ ಎಲ್ಲಾ ಯೋಗಸಾಧಕರು ಪತಂಜಲಿ ಮಹರ್ಷಿಯಲ್ಲಿ ಪ್ರಾರ್ಥನೆಗೈದು, ಪತಂಜಲಿ ಮಹರ್ಷಿಗಳು ರಚಿಸಿದ ಯೋಗಸೂತ್ರಗಳಲ್ಲಿನ ಮೊದಲನೆಯದಾದ ಸಮಾಧಿ ಪಾದದಲ್ಲಿ ಬರುವ ಎಲ್ಲಾ ಸೂತ್ರಗಳನ್ನು ಪಠಿಸಿದರು. ಸುಜಾತ ಪೋಲಾ ಎಲ್ಲರನ್ನು ಸ್ವಾಗತ ಕೋರಿದರು. ನಂತರ ಯೋಗಕೇಂದ್ರದ ಅಭ್ಯಾಸಿಗಳಾದ ಶ್ರೀನಿವಾಸ್ ರಾವ್ ಅವರು ಪ್ರಸ್ತಾವನೆ ನುಡಿಗಳನ್ನು ಹೇಳಿದರು. ಯೋಗಕೇಂದ್ರವು ಜಯನಾಮ ಸಂವತ್ಸರ ಯುಗಾದಿಯ ದಿನದಂದು 31 ಮಾರ್ಚ್ 2014 ಆರಂಭವಾಯಿತು. ಯೋಗಭೀಷ್ಮರೆನಿಸಿದ ವಿಶ್ವವಿಖ್ಯಾತ ಶ್ರೀ ಬಿ.ಕೆ.ಎಸ್ ಅಯ್ಯಂಗಾರ್ ಅವರ ಪದ್ಧತಿಯಲ್ಲಿ ಯೋಗ ಕೇಂದ್ರವು ನಡೆಯುತಿದ್ದು. ಸಾಕಷ್ಟು ಅಭ್ಯಾಸಿಗಳು ಅದರ ಪ್ರಯೋಜನವನ್ನು ಪಡೆದಿದ್ದಾರೆ. ಅಯ್ಯಂಗಾರ್ ಯೋಗ ಪದ್ಧತಿಯಲ್ಲಿ ಆಸನ ಮತ್ತು ಪ್ರಾಣಾಯಾಮಗಳ ಅಭ್ಯಾಸಿಸುವ ವಿಧಾನ, ಆಸನಗಳ ಅನುಕ್ರಮ ಮತ್ತು ಯೋಗಾಸನಗಳನ್ನು ಪರಿಕರಗಳನ್ನು ಬಳಸಿ ಮಾಡುವ ವಿಶೇಷ ವಿಧಾನಗಳು ಎಲ್ಲರಲ್ಲೂ ಅಭ್ಯಾಸಕ್ಕೆ ವಿಶ್ವಾಸವನ್ನು ಮೂಡಿಸಿ, ಶಾರೀರಿಕ ಮತ್ತು ಮಾನಸಿಕ ನೋವುಗಳಿಂದ ದೂರಗೊಳಿಸಿ ಯೋಗದ ಅಭ್ಯಾಸಿಗಳನ್ನಾಗಿಸಿದೆ. ಅಲ್ಲದೇ ಜೀವನವನ್ನು ಶಿಸ್ತುಬದ್ಧಗೊಳಿಕೊಂಡಿದ್ದಾರೆ. ಅವರ ಬೋಧನೆಯು ಜನಮಾನಸದಲ್ಲಿ ಬಂದಿದ್ದು, ಇಂದು ಯೋಗಸಾಧಕರ ದೊಡ್ಡಬಳಗವೇ ಆಗಿದ್ದು, ಬಳ್ಳಾರಿ ನಗರವಲ್ಲದೇ ಹೊರರಾಜ್ಯ ಮತ್ತು ವಿದೇಶದಿಂದಲೂ ಅಭ್ಯಾಸಿಗಳು ಇದ್ದಾರೆ. ಇಂದು ಕೇಂದ್ರವು ಹತ್ತುವರ್ಷಗಳನ್ನು ಪೂರೈಸಿ ಸಮಾಜದಲ್ಲಿ ಯೋಗಭ್ಯಾಸದ ಅಗತ್ಯತೆ ಮತ್ತು ಮಹತ್ವವನ್ನು ಜಾಗೃತಿ ಮೂಡಿಸುತ್ತಿದೆ. ಈ ದಶಮಾನೋತ್ಸವ ಸಂದರ್ಭದಲ್ಲಿ ಆರಂಭದ ಯೋಗಭ್ಯಾಸಿಗಳಿಗೆ ಅತ್ಯಂತ ಉಪಯುಕ್ತವಾಗುವನ್ನು ಹೊರತರುತ್ತಿದ್ದು, ಅದು ಅವರ ಜೀವನ ಗುರಗಳಿಂದಲೇ ಬಿಡುಗಡೆಯಾಗುತ್ತಿರುವುದು ಮತ್ತೊಂದು ವಿಶೇಷ. ಈ ಎಲ್ಲಾ ಪ್ರಯೋಜನಗಳನ್ನು ಪಡೆಯುತ್ತಾ, ಯೋಗಕೇಂದ್ರದಲ್ಲಿ ಪ್ರಯೋಜನಗಳನ್ನು ಎಲ್ಲರಿಗೂ ತಿಳಿಸುತ್ತಾ, ಉತ್ತಮ ಸಮಾಜದ ನಿರ್ಮಾಣಕ್ಕೆ ಕೈಜೋಡಿಸೋಣ ಎಂದು ಹೇಳಿದರು.
ಯೋಗಕೇಂದ್ರದಲ್ಲಿ ಕಳೆದ ವರ್ಷದಿಂದ ಮಕ್ಕಳಿಗಾಗಿಯೇ ಪ್ರತಿ ಭಾನುವಾರ ತರಗತಿಗಳು ನಡೆಯುತ್ತವೆ. ಮಕ್ಕಳ ಬೆಳವಣಿಗೆಗೆ ಯೋಗವು ಅತ್ಯಂತ ಉಪಯುಕ್ತವಾದುದು. ಮಕ್ಕಳು ನೀಡಿದ ಯೋಗ ಪ್ರದರ್ಶನವು ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ತೇಜು, ಚಂದನ್, ಮಾನಸ ಪ್ರದರ್ಶನದಲ್ಲಿದ್ದರು. ನಂತರ ಕೇಂದ್ರದ ಯೋಗದ ಅಭ್ಯಾಸದಲ್ಲಿರುವ ವಿವಿಧ ಹಂತದ ಸಾಧಕರೆಲ್ಲರು ಸೇರಿ ಪ್ರದರ್ಶನವನ್ನು ನೀಡಿದರು. ಎಲ್ಲರೂ ತಮ್ಮ ನಿತ್ಯ ಅಭ್ಯಾಸದ ಪ್ರದರ್ಶನ ಮಾಡಿದರು. ಅದು ಕೇವಲ ಪ್ರದರ್ಶನವಲ್ಲ ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾಧನ ಹಂತದಲ್ಲಿರುವವರೇ, ಅದು ನಿದರ್ಶನದಂತೆ ಇತ್ತು. ಪ್ರದರ್ಶನ ವೀಕ್ಷಿಸಿದ ಮುಖ್ಯ ಅತಿಥಿಗಳಾದ ಶ್ರೀ ರಾಜಶೇಖರ ಜೀ ತುಂಬಾ ಖಷಿಯಾಗಿ ಎಲ್ಲರೂ ಯೋಗ ಸಾಧನೆಯ ಮಾರ್ಗದಲ್ಲಿದ್ದಾರೆ ಎಂದರು. ಪ್ರದರ್ಶನವನ್ನು ಕೇಂದ್ರದ ಹಿರಿಯ ಅಭ್ಯಾಸಿ ಮಾಧವಿ ಪುಣ್ಯಮೂರ್ತಿ ನಿರ್ವಹಿಸಿದರು.
ನಂತರ ಪುಸ್ತಕ ಬಿಡುಗಡೆ ಸಮಾರಂಭ ಕುಮಾರಿ ಹರ್ಷಿಣಿ ಪ್ರಾರ್ಥನೆಯಿಂದ ಆರಂಭವಾಯಿತು. ಮುಖ್ಯ ಅತಿಥಿಗಳಾದ ಶ್ರೀ ರಾಜಶೇಖರ ಜೀ ಪುಸ್ತಕವನ್ನು ಬಿಡುಗಡೆ ಮಾಡಿದರು. ಯೋಗಕೇಂದ್ರದ ಸಂಸ್ಥಾಪಕರು ಮತ್ತು ಪುಸ್ತಕದ ಲೇಖಕರಾದ ಶ್ರೀ ವಿರೂಪಾಕ್ಷ ಡಾಣಿ ಪುಸ್ತಕದ ಕುರಿತು ಮಾತನಾಡಿದರು. ಬಾಲ್ಯದಿಂದಲೇ ಯೋಗದ ಅಭ್ಯಾಸವಿದ್ದರೂ ಯೋಗ ಶಿಕ್ಷಕನಾಗುತ್ತೇನೆಂದುಕೊಂಡಿರಲಿಲ್ಲ. ವಿಧಿ ಮತ್ತು ಸಂಸ್ಕಾರಗಳು ಈ ಪಥದಲ್ಲಿ ತಂದಿದೆ. ಪುಸ್ತಕ ಬರೆಯುವ ತುಡಿತ ನನ್ನಲ್ಲಿ ಇರಲಿಲ್ಲ. ತರಗತಿಗೆ ಬರುವ ಅಭ್ಯಾಸಿಗಳು ನೀವು ಹೇಳಿಕೊಡುವ ಎಲ್ಲಾ ಆಸನಗಳ ವಿಧಾನ ತುಂಬಾ ಚೆನ್ನಾಗಿದೆ. ಯಾವುದಾದರೂ ಪುಸ್ತಕವಿದೆಯೇ? ಅದನ್ನು ನೋಡಿ ಅಭ್ಯಾಸಿಸಬಹುದು ಎಂದು ಕೇಳಿದರು. ನಾನು ಗುರೂಜಿಯವರ ಯೋಗದೀಪಿಕಾ ಪುಸ್ತಕ ನೋಡಿ ಅನುಸರಿಸಿ ಎನ್ನುತ್ತಿದ್ದೆ. ಯೋಗದೀಪಿಕಾ ಅತ್ಯಂತ ಸುಂದರವಾಗಿದೆ. ಆದರೆ ಆರಂಭದ ಅಭ್ಯಾಸಿಗಳಿಗೆ ಅದು ಕಠಿಣವೆನಿಸಬಹುದು. ಮಾತ್ತಾವ ಪುಸ್ತಕಗಳು ಕನ್ನಡದಲ್ಲಿ ಅನುವಾದಗೊಂಡಿಲ್ಲ. ಅದ್ದರಿಂದ ಮನಸ್ಸಿನಲ್ಲಿ ಆರಂಭದ ಅಭ್ಯಾಸಿಗಳಿಗೆ ಪುಸ್ತಕವನ್ನು ರಚಿಸುವ ಸಂಕಲ್ಪವಾಯಿತು. ಸತತ ಮೂರು ವರ್ಷಗಳ ಪ್ರಯತ್ನದಿಂದ ಈ ಪುಸ್ತಕವು ಹೊರಗೆ ಬಂದಿದೆ. 300 ಕ್ಕೂ ಹೆಚ್ಚು ಆಸನಗಳ ಚಿತ್ರಗಳನ್ನೊಳಗೊಂಡ ಈ ಪುಸ್ತಕವು ಅವುಗಳಿಗೆ ಸರಿಯಾದ ವಿವರಣೆ, ವಿಧಾನ ಮತ್ತು ಸೂಚನೆ ಹಾಗೂ ಪ್ರಯೋಜನಗಳನ್ನು ವಿವರವಾಗಿ ತಿಳಿಸಲಾಗಿದೆ. ಅಲ್ಲದೆ ಅಭ್ಯಾಸಕ್ಕೆ ಆಸನಗಳ ಅನುಕ್ರಮವನ್ನು ಸಹ ತಿಳಿಸಲಾಗಿದೆ. ಪ್ರತಿಯೊಂದು ಆಸನಗಳನ್ನು ತಲುಪುವ ಸ್ಥಿತಿಗಳನ್ನು ಹಂತ ಹಂತವಾಗಿ ಚಿತ್ರಗಳನ್ನು ತೋರಿಸಿದ್ದು, ಕನ್ನಡ ಭಾಷೆ ಅರ್ಥವಾಗದವರೂ ಸಹ ಚಿತ್ರಗಳನ್ನು ನೋಡಿ ಅರ್ಥೈಸಿಕೊಳ್ಳಬಹುದಾಗಿದೆ.
ಅಯ್ಯಂಗಾರ್ ಯೋಗದಲ್ಲಿ ಎಲ್ಲರೂ ಅಭ್ಯಾಸವನ್ನು ಮಾಡಬಹುದಾಗಿದೆ. ಶರೀರ ನೂನ್ಯತೆಗಳಿದ್ದಾಗ, ಖಾಯಿಲೆ, ವಯಸ್ಸು ಇತರೆ ಕಾರಣಗಳಿದ್ದರೂ ಯೋಗ ಅಭ್ಯಾಸ ಮಾಡಬಹುದಾಗಿದೆ. ಗುರೂಜಿಯವರ ಅದ್ಭುತ ಅನ್ವೇಷಣೆ ಯೋಗ ಪರಿಕರಗಳು, ಅವುಗಳಿಂದ ಎಲ್ಲರೂ ತಮ್ಮ ಶರೀರದ ಅಗತ್ಯತೆಗನುಗುಣವಾಗಿ ಅಭ್ಯಾಸ ಮಾಡಬಹುದಾಗಿದೆ. ಈ ಪುಸ್ತಕದಲ್ಲಿ ಕಷ್ಟವೆನಿಸಿದವರಿಗೆ ಪರಿಕರಗಳ ಸಹಾಯ ತೆಗೆದುಕೊಂಡು ಮಾಡುವುದನ್ನು ತಿಳಿಸಿದೆ. ಅಲ್ಲದೇ ಸ್ತ್ರೀಯರು ಅಭ್ಯಾಸಿಸುವ ವಿಧಾನವನ್ನು ಸಹ ತಿಳಿಸಲಾಗಿದೆ. ಪುಸ್ತಕದ ತಯಾರಿಗೆ ಸಾಕಷ್ಟು ಜನ ಎಲೆಮರೆಯಂತೆ ಕೆಲಸ ಮಾಡಿದ್ದಾರೆ. ಅವರೆಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.
ಮುಖ್ಯ ಅತಿಥಿಗಳಾದ ಶ್ರೀ ರಾಜಶೇಖರ ಜೀ ಮಾತನಾಡುತ್ತಾ ಹೇಳಿದರು. ವಿರೂಪಾಕ್ಷನು ವಿಧ್ಯಾಭಾಸಕ್ಕಾಗಿ ಬಳ್ಳಾರಿಗೆ ಬಂದು ಜೀವನದ ವಿಧಿ ಅವನು ಕೆಲಸಕ್ಕೆ ಸೇರುವಂತಾಯಿತು. ಯೋಗದ ಸಂಸ್ಕಾರ ಅವನಲ್ಲಿದ್ದದ್ದರಿಂದ ಈ ಮಾರ್ಗ ತುಳಿಯುವಂತಾಯಿತು. ಬಿ.ಕೆ.ಎಸ್ ಅಯ್ಯಂಗಾರ ಅವರ ಕೇಂದ್ರವಾದ ಪುಣೆಗೆ ಹೋಗಿ, ಪ್ರತಿ ವರ್ಷವೂ ಕಲಿಕೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾನೆ. ಯೋಗ ಎಂದರೆ ಬರಿ ಆಸನ, ಪ್ರಾಣಾಯಾಮ ಅಷ್ಟೇ ಅಲ್ಲ ಆತ್ಮನನ್ನು ಪರಮಾತ್ಮನಲ್ಲಿ ಜೋಡಿಸುವ ಪ್ರಕ್ರಿಯೆ. ನಮ್ಮೆಲ್ಲರ ಜೀವನದ ಹಾದಿ ಮನಸ್ಸನ್ನು ತುಂಬಾ ಚಂಚಲಗೊಳಿಸಿದೆ. ವೃತ್ತಿಗಳು ಮನಸ್ಸಿನಲ್ಲಿ ಆಸೆಯನ್ನು ಹುಟ್ಟಿಸಿ ಸಾಕಷ್ಟು ಕರ್ಮವನ್ನು ಮಾಡಿಸುತ್ತವೆ. ಪತಂಜಲಿ ಮಹರ್ಷಿಯು ಮನಸ್ಸಿನ ವೃತ್ತಿಗಳನ್ನು ನಿರೋಧಿಸಿ ಆಸನ, ಪ್ರಾಣಾಯಾಮ, ಧಾರಣ, ಧ್ಯಾನದ ಮುಖಾಂತರ ಆತ್ಮ ಸಾಧನೆಯ ಕಡೆ ಹೋಗುವುದಾಗಿದೆ. ಚಂಚಲವಾಗಿರುವ ಮನಸ್ಸನ್ನು ಅರ್ಥಮಾಡಿಕೊಂಡು ಸರಿಯಾದ ಕ್ರಮದಲ್ಲಿ ನಿರ್ದೇಶಿಸಬೇಕು. ಅದಕ್ಕೆ ಯೋಗಸನ ಮತ್ತು ಪ್ರಾಣಾಯಾಮಗಳ ಅಭ್ಯಾಸ ಸರಿಯಾದ ಕ್ರಮ ಇರಬೇಕು. ಸರಿಯಾದ ಗುರು ಸಹ ಬೇಕು. ಮನುಷ್ಯನ ವ್ಯಕ್ತಿತ್ವ ಸರಿಯಾಗಿ ಬೆಳೆಯದೇ ಹೋದಾಗ ಮನಸ್ಸಿನ ವಿಕೃತಿಗಳು ಸಮಾಜದಲ್ಲಿ ಅಶಾಂತಿಯನ್ನು ಹುಟ್ಟಿಸುತ್ತವೆ. ವ್ಯಕ್ತಿತ್ವದ ಬೆಳವಣಿಗೆಗೆ ಪ್ರತಿಯೊಬ್ಬ ಮನುಷ್ಯ ತನ್ನನ್ನು ತಾನು ಅರಿಯುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ವಿರೂಪಾಕ್ಷ ನಡೆಸುತ್ತಿರುವ ಈ ಕೇಂದ್ರವು ಎಲ್ಲರಲ್ಲೂ ಜಾಗೃತಿ ಮೂಡಿಸುತ್ತಿದ್ದು, ಸಮಾಜಮುಖಿಯಾಗಿದೆ. ದಶಮಾನೋತ್ಸವಕ್ಕೆ ಈ ಪುಸ್ತಕವು ಬಿಡುಗಡೆಯಾಗಿದ್ದು, ಎಲ್ಲರಿಗೂ ಉಪಯೋಗವಾಗಲಿದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಮ್ಮ ಯೋಗಸಾಧನೆಯನ್ನು ಬಿಡದೇ ಸತತ ಅಭ್ಯಾಸ ಮಾಡಬೇಕು ಎಂದು ತಿಳಿಸಿದರು.

ಕೇಂದ್ರದ ಅಭ್ಯಾಸಿಗಳಾದ ಸೌಜನ್ಯ, ರಜಿನಿ ಅಗಿವಾಲ್, ವೀರೇಶ್, ವಿಕ್ರಮ್.ಕೆ ತಮ್ಮ ಅನುಭವವನ್ನು ಹಂಚಿಕೊಂಡರು. ನಂತರ ವಿಜಯಲಕ್ಷ್ಮೀ.ಎಸ್ ಎಲ್ಲರಿಗೂ ವಂದಿಸಿದರು. ಭೊಜನದ ನಿರ್ವಹಣೆಯನ್ನು ರಜಿನಿ ಅಗಿವಾಲ್ ಮತ್ತು ಅಪರ್ಣ ನಿರ್ವಹಿಸಿದರು. ಪುಸ್ತಕದ ವಿತರಣೆಯಲ್ಲಿ ಶೃತಿ,ಜಿ ಮತ್ತು ಸಂಜನಾ ನಿರ್ವಹಿಸಿದರು. ಮಾಧ್ಯಮ ಮಿತ್ರರರು ಸಹ ಉಪಸ್ಥಿತರಿದ್ದರು.
ಕಾರ್ಯಕ್ರಮದ ತಯಾರಿಯನ್ನು ಮನಿಷ್, ಮಲ್ಲಿಕಾರ್ಜುನ, ನವೀನ್, ವೆಂಕಟಶಿವಯ್ಯ, ಶ್ರೀನಿವಾಸರಾವ್, ಸುಧಾಕರ್, ಮಾಧವಿ, ಸುಜಾತ, ಸಹನಾ, ನಂದಿನಿ, ಪ್ರವೀಣ ಡಾಣಿ ಇತರರು ಸೇರಿ ನಿರ್ವಹಸಿದರು. ಪತಂಜಲಿ ವಿಗ್ರಹದ ಅಲಂಕಾರವನ್ನು ಶ್ರೀದೇವಿ ಪೋಲಾ ನಿರ್ವಹಿಸಿದರು.
---------------------------------------------------------------------------------
Annual Day Celebration and release of the book,
“Arambhavasthegondu Yoga Patha”
Yogasree Iyengar Yoga Center, Bellary, has completed ten years since its inception. This special occasion was marked with the release of the book "Arambhavasthegondu Yoga Patha " . Founded by Sri Virupaksha Dani, an experienced yoga instructor, the center has been diligently conducting yoga classes for ten years. His experience has benefited many, and this book is expected to reach even more yoga enthusiasts, serving as an excellent guide. The program began promptly at 5:30 PM as scheduled. All practitioners at the yoga center had prepared enthusiastically. Decoration, arrangements for seating, the stage, and the release of the book were meticulously organized. Following this, everyone was treated to a meal, fostering a sense of unity among all.
The program commenced as per the schedule. Vikram K. and Srinivas managed the event. Sri Rajashekar Ji, Prachark of the Rashtriya Swayamsevak Sangh, was the chief guest . After the ceremonial lighting of the lamp, all yoga practitioners offered prayers to Maharshi Patanjali and recited the first chapter of Patanjali Maharshi's Yoga Sutras, known as Samadhi Pada. The gathering was warmly welcomed by Smt.Sujata Pola . Following this, the practitioner Srinivas Rao gave a brief outline of the institute and of our beloved teacher, Sri Virupaksha Dani. The center was inaugurated on March 31, 2014, the day of Ugadi. It follows the teachings of the renowned yoga master, Sri B.K.S. Iyengar, benefiting many practitioners. Their method, including the sequence of asanas and the use of props, instills confidence in all practitioners and alleviates physical and mental ailments as well as disciplining their lives. His teachings have gained popularity worldwide, attracting practitioners not only from Ballari but also from other states and countries. Today, after completing ten years, the center continues to raise awareness about the importance and necessity of yoga practice in society. Let's educate everyone about the benefits of yoga and contribute to building a better society.
The yoga center has been conducting classes every Sunday for children since last year. Yoga is extremely beneficial for children's development. The yoga demonstration by the children received everyone's appreciation. Teju, Chandan, and Manasa performed exceptionally well. Later, practitioners at the center from various levels joined and showcased their skills. Everyone demonstrated their daily practice, which was not just a display but a reflection of their dedication in their lives, just as it was demonstrated. Sri Rajashekharji expressed his admiration, saying everyone is on the path of yoga practice. I had an opportunity to coordinate the demonstration.
The book release ceremony began with a prayer by Kumari Harshini . The book was released by the chief guest, Sri Rajashekharji. Sri Virupaksha Dani, the founder of the yoga center and the author of the book, spoke about it. He mentioned that even though he had been practicing yoga since childhood, he never thought he would become a yoga teacher. Circumstances and upbringing led him to this path. The effort to write the book did not come easily. The practitioners were asking if there was any book available in Kannada language, and thus the idea of writing a book emerged. The book "Yoga Deepika" is beautifully crafted. However, it might seem challenging for beginners. No books translated in Kannada were available. Hence, there was a need for a book for beginners in Kannada language. After three years of continuous effort, this book has been released. It contains over 300 illustrations of asanas, along with detailed explanations, techniques, and benefits. It also provides a step-by-step guide for practicing each asana, making it understandable even for those who do not understand Kannada.
In Iyengar Yoga, everyone can practice regardless of physical limitations, illnesses, age, or other reasons. Guruji's marvelous research has made yoga tools accessible to all, suiting individual needs. The book also provides guidance on using props for those finding certain asanas challenging. Additionally, it teaches the practice methods for women.
Chief guest Sri Rajashekharji addressed the gathering. He mentioned how Virupaksha's research led him to yoga, and his association with B.K.S. Iyengar's Pune center made him start his journey in teaching yoga. Yoga is not just about postures or breathing exercises; it's a process of connecting the soul with the supreme soul. Our lives have become restless due to the turmoil of the mind. Occupations create desires in the mind and make us perform a lot of actions. Sage Patanjali devised a way to control the fluctuations of the mind through asanas, pranayama, concentration, and meditation, leading to self-realization. It is crucial to understand and direct the restless mind properly. Therefore, the practice of yoga postures and pranayama should be in the correct sequence, guided by a proper guru. Every individual should strive to understand themselves.

The practitioners of the center, Soujanya, Rajini Agiwal, Veeresh, Vikram K, and Vijayalakshmi S shared their experiences. Later, Vijayalakshmi expressed gratitude to everyone present.
The day was well celebrated and brought smiles in the faces of one and all present.
-Madhavi. G
Commentaires