top of page
Search

ಅಂತರಾಷ್ಟ್ರೀಯ ಯೋಗ ದಿನಾಚಾರಣೆ

  • yogasreeiycinfo
  • Jul 14, 2022
  • 3 min read

ಪ್ರತಿ ವರ್ಷದಂತೆ ಈ ವರ್ಷವೂ ಸಹ ಅಂತರಾಷ್ಟ್ರೀಯ ಯೋಗ ದಿನಾಚಾರಣೆಯ ನಿಮಿತ್ತ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಲು ಉಚಿತವಾಗಿ ಮೂರು ದಿನಗಳ ಅಯ್ಯಂಗಾರ್ ಯೋಗ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಶಿಬಿರದಲ್ಲಿ ಸ್ಥಳಿಯರಲ್ಲದೇ ಹೊರಗಿನಿಂದಲೂ ಭಾಗವಹಿಸಿದ್ದರು. ಶಿಬಿರಕ್ಕೆ ಪರಿಕರಗಳು ಹಾಗು ಪತಂಜಲಿ ವಿಗ್ರಹ ಹಾಗು ಗುರೂಜಿ ಬಿ.ಕೆ.ಎಸ್. ಅಯ್ಯಾಂಗಾರ್ ಹಾಗೂ ಗೀತಾ ಅಯ್ಯಾಂಗಾರ್ ಭಾವ ಚಿತ್ರಗಳಿಗೆ ಪೂಜೆ ಸಲ್ಲಿಸಲಾಯಿತು. ನಂತರ ಪಂತಲಿ ಯೋಗ ಸೂತ್ರಗಳಲ್ಲಿನ ಮೊದಲನೆಯ ಸಮಾಧಿ ಪಾದದ ಸೂತ್ರಗಳನ್ನು ಪಠಿಸಲಾಯಿತು.


ತಾಂತ್ರಿಕ ಯುಗದಲ್ಲಿರುವ ನಾವೆಲ್ಲರೂ ನಮಗರಿವಿಲ್ಲದೇ, ಗುರಿಯಿಲ್ಲದೇ ಓಡುತ್ತಿದ್ದೇವೆ. ಮನುಷ್ಯನ ಬದುಕು ಒತ್ತಡಸಹಿತವಾಗಿ ವಿವಿಧ ರೀತಿಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಾ ಸಾಗಿಸುತ್ತಿದ್ದಾರೆ. ಮನುಷ್ಯನ ಬದಕುನ್ನು ಒತ್ತಡರಹಿತ ಹಾಗು ತನ್ನ ಬದುಕಿನ ಅಂತ:ಸತ್ವವನ್ನು ಕಂಡುಕೊಳ್ಳಲು ನಮ್ಮ ಪೂರ್ವಜರು ಸಾಕಷ್ಟು ಪ್ರಯೋಗಗಳನ್ನು ನಡೆಸಿ ಹಲವಾರು ಬದುಕಿನ ದಾರಿಗಳನ್ನು ಜೀವಿಸಿ ಅದರ ಸತ್ಯವನ್ನು ತಿಳಿದು ದಾಖಲಿಸಿ ನಮಗೆ ಪೂರೈಸುವುದಲ್ಲದೆ ಅವುಗಳನ್ನು ಸಂರಕ್ಷಿಸಿಕೊಂಡು ಬಂದಿದ್ದಾರೆ. ಸಹಜವಾಗಿ ನಾವೆಲ್ಲರೂ ಮಾತನಾಡುವಾಗ ಹಳೆಯ ಕಾಲ ಬಹಳ ಚೆನ್ನಾಗಿತ್ತು, ಊಟದಲ್ಲಿನ ಸತ್ವ, ಪ್ರಕೃತಿಯೊಂದಿಗಿನ ಬದುಕು ಹಾಗು ಬದುಕಿನ ಶೈಲಿಯಲ್ಲಿ ಸಾಕಷ್ಟು ಶ್ರಮವಹಿಸುತ್ತಿದ್ದರಿಂದ ಶರೀರದ ಅವಯವಗಳು ಚಲನೆ ಹೊಂದಿ, ಸುಗಮಗೊಂಡು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಧೃಡತೆಯನ್ನು ಹೊಂದಿದ್ದರು. ಇಂದಿನ ಬದುಕಿನ ಶೈಲಿ ಯಾಂತ್ರಿಕವಾಗಿದ್ದು, ದೈಹಿಕವಾಗಿ ಸರಿಯಾದ ಪರಿಶ್ರಮವಿಲ್ಲದೇ, ಮೆದುಳಿನ ಕೆಲಸ ಹೆಚ್ಚಾಗಿಸಿಕೊಂಡು, ಐಷಾರಾಮದ ಜೀವನ ಶೈಲಿಗೆ ಮಾರುಹೋಗಿ ಸಾಕಷ್ಟು ಒತ್ತಡಗಳನ್ನು ತಂದುಕೊಂಡಿದ್ದಾರೆ. ಇಂದರಿಂದ ಸಾಕಷ್ಟು ಜನ ಮಾನಸಿಕವಾಗಿ ಮತ್ತು ವಿವಿಧ ರೀತಿಯ ರೋಗಗಳಿಂದ ಬಾಧಿತರಾಗಿದ್ದಾರೆ. ಜೀವನ ಶೈಲಿಯನ್ನು ಅರ್ಥ ಮಾಡಿಕೊಳ್ಳದೇ ರೋಗಗಳಿಗೆ ತುತ್ತಾಗಿ ಆಸ್ಪತ್ರೆಗಳಿಗೆ ಅಲಿಯುವುದಲ್ಲದೇ ಕೆಲವು ಸಲ ಸರಿಯಾದ ಪರಿಹಾರ ಸಿಗದೇ ಒದ್ದಾಡಿ ಕೊನೆಗೆ ಯೋಗ ತರಗತಿಗಳನ್ನು ಹುಡುಕಿ ಹೋಗುತ್ತಿದ್ದಾರೆ.


ಪೂರ್ವಜರ ಕೊಡುಗೆಗಳಲ್ಲಿ ಯೋಗವೂ ಕೂಡ ಒಂದಾಗಿದ್ದು, ಇಂದು ಪ್ರಪಂಚವೇ ಯೋಗಮಾರ್ಗವನ್ನು ಅನುಸರಿಸಿ ನೆಮ್ಮಧಿಯ ಜೀವನವನ್ನು ಕಂಡುಕೊಳ್ಳುವುದರಲ್ಲಿ ಕೆಲವರು ಯಶಸ್ವಿಯಾಗಿದ್ದಾರೆ. ಇಂದು ಎಲ್ಲರಿಗೂ ಯೋಗ ಪರಿಚಿತವಾಗಿದ್ದು, ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ತವಕದಲ್ಲಿದ್ದಾರೆ. ಐದು ಸಾವಿರ ವರ್ಷದ ಹಿಂದೆ ಪತಂಜಲಿ ಮಹಷರ್ಿಯು ಯೋಗಸೂತ್ರಗಳನ್ನು ಜೋಡಿಸಿ ಅಷ್ಟಾಂಗ ಯೋಗದ ಹಂತಗಳನ್ನು ವಿವರಿಸಿ ಹೇಳಿದ್ದಾರೆ. ಇಂದು ಕೆಲವರು ಪ್ರಾಣಾಯಾಮದಿಂದ, ಧ್ಯಾನದಿಂದಲೂ ಸಹ ಯೋಗವನ್ನು ಆರಂಭಿಸುತ್ತಾರೆ. ಆದರೆ ಪತಂಜಲಿಯ ಅಷ್ಟಾಂಗಯೋಗದ ಹಂತಗಳನ್ನು ನೋಡಿದಾಗ ಮೊದಲು ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ದ್ಯಾನ, ಸಮಾಧಿ ಹೀಗೆ ಹಂತ ಹಂತವಾಗಿ ಹೇಳಿದ್ದಾರೆ. ಇದನ್ನು ಸರಿಯಾಗಿ ತಿಳಿಯದೇ ತಪ್ಪು ಅಭ್ಯಾಸ ಮಾಡಿ ದೂರುವವರನ್ನು ನೋಡಿದ್ದೇವೆ.


ವ್ಯಕ್ತಿಯು ಸಮಾಜದಲ್ಲಿ ಘನತೆಯಿಂದ ಬದುಕಲು ಸಾರ್ವತ್ರಿಕ ನೀತಿ ನಿಯಮಗಳನ್ನು ಮೊದಲನೆಯ ಹಂತವಾದ ಯಮದಲ್ಲಿ ಹೇಳಿದ್ದಾರೆ. ಅವುಗಳೇ ಅಹಿಂಸೆ, ಸತ್ಯ, ಅಸ್ತೇಯ ( ಕದಿಯದಿರುವುದು), ಬ್ರಹ್ಮಚರ್ಯ ಮತ್ತು ಅಪರಿಗ್ರಹ( ಅವಶ್ಯಕತೆಗಿಂತ ಹೆಚ್ಚು ಸಂಗ್ರಹಿಸದಿರುವುದು). ವ್ಯಕ್ತಿಯೂ ಆಂತರಿಕವಾಗಿ ಶಿಸ್ತನ್ನು ಗಳಿಸಿ, ಶಿಸ್ತಿನಿಂದ ಅತ್ಮ - ಶುದ್ಧೀಕರಣಗೊಳಿಸಿಕೊಳ್ಳಲು ಎರಡನೇ ಹಂತವಾದ ನಿಯಮ ದಲ್ಲಿ ಹೇಳಿದ್ದಾರೆ. ಅವುಗಳೇ, ಶೌಚ (ದೈಹಿಕ ಮತ್ತು ಮಾನಸಿಕ ಶುಚಿ), ಸಂತೋಷ ( ತೃಪ್ತಿ), ತಪಸ್ಸು (ವ್ಯಕ್ತಿತ್ವದ ಬೆಳವಣಿಗೆ), ಸ್ವಾಧ್ಯಾಯ (ತನ್ನನೇ ಅಧ್ಯಯನ ಮಾಡುವುದು), ಈಶ್ವರ ಪ್ರಣಿಧಾನ(ಭಗವಂತನಿ ಅರ್ಪಸಿವುದು). ಯಮ ಮತ್ತು ನಿಯಮಗಳು ಅಭ್ಯಾಸಿಯ ಕಾಮ ಮತ್ತು ಉದ್ವೇಗಗಳನ್ನು ನಿಗ್ರಹಿಸಿ ಸಮಾಜದಲ್ಲಿ ಇತರರೊಡನೆ ಸಾಮರಸ್ಯದೊಂದಿಗೆ ಬದುಕುವಂತೆ ಮಾಡುತ್ತದೆ.


ಮೂರನೇ ಹಂತದಲ್ಲಿ ಆಸನಗಳನ್ನು ವಿವರಿಸಿದ್ದಾರೆ. ಅಭ್ಯಾಸಿಯು ವಿವಿಧ ಆಸನಗಳನ್ನು ಅಭ್ಯಾಸಿಸುವುದರಿಂದ ದೇಹವನ್ನು ಆರೋಗ್ಯಕರವಾಗಿಟ್ಟುಕೊಳ್ಳುವುದಲ್ಲದೇ ಶರೀರದ ಬಲವನ್ನು ಹೆಚ್ಚಿಸಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ. ಶರೀರವು ಆತ್ಮಕ್ಕೆ ವಾಹನವಿದ್ದಂತೆ, ಆಸನಗಳ ಅಭ್ಯಾಸದಿಂದ ಹಲವಾರು ರೋಗಗಳನ್ನು ದೂರವಿಡುವುದಲ್ಲದೇ ಆತ್ಮಜ್ಜಾನಕ್ಕೆ ದೇಹವನ್ನು ಸಜ್ಜುಗೊಳಿಸಲು ಸಹಾಯ ಮಾಡುತ್ತದೆ. ಮೊದಲ ಈ ಮೂರು ಹಂತಗಳು ವ್ಯಕ್ತಿಯ ಬಹಿರಂಗ ಸಾಧನೆಗೆ ಅನುಕೂಲವಾಗಿರುತ್ತವೆ.


ಮುಂದಿನ ಎರಡು ಹಂತಗಳು ಪ್ರಾಣಾಯಾಮ ಮತ್ತು ಪ್ರತ್ಯಾಹಾರ. ಈ ಹಂತಗಳಲ್ಲಿ ಉಸಿರಾಟವನ್ನು ಕ್ರಮಗೊಳಿಸಿ ಮನಸ್ಸಿನ ಮೇಲೆ ಹತೋಟಿಯನ್ನು ತಂದು ವಿಷಯವಾಸನೆಗಳಿಂದ ಇಂದ್ರಿಯಗಳನ್ನು ಮುಕ್ತಗೊಳಿಸಲು ಸಹಾಯ ಮಾಡುತ್ತದೆ ಹಾಗಾಗಿ ಇವೆರಡನ್ನು ಅಂತರಂಗದ ಸಾಧನೆಗಳೆನ್ನಬಹುದು. ನಂತರದ ಹಂತಗಳಾದ ಧಾರಣ, ಧ್ಯಾನ, ಸಮಾಧಿ. ಇವು ವ್ಯಕ್ತಿಯ ಆತ್ಮನ ಅಂತರಂಗದೊಳಕ್ಕೆ ಕೊಂಡೈಯಲು ಸಹಾಯ ಮಾಡುತ್ತದೆ. ಸಾಧಕನಿಗೆ ಆತ್ಮಾನುಭೂತಿಯಾಗಿ, ಅಂತರಾತ್ಮವನ್ನು ಸೇರಿ ನಂತರ ವಿಶ್ವಾತ್ಮದೊಂದಿಗೆ ಎಂದರೆ ಸೃಷ್ಟಿಕರ್ತನೊಂದಿಗೆ ಹೊಂದಿಕೊಳ್ಳುತ್ತದೆ. ಹಾಗಾಗಿ ಈ ಮೂರು ಹಂತಗಳನ್ನು ಅಂತರಾತ್ಮದ ಸಾಧನೆಗಳೆಂದು ಕರೆಯುತ್ತಾರೆ. ಇಷ್ಟೊಂದು ಗಹನವಾದ ವಿಚಾರಗಳನ್ನು ಹೊಂದಿರುವುದರಿಂದ ಇದನ್ನು ಕಲಿಯುವುದು ಸಹ ಅಷ್ಟೇ ಕಷ್ಟ. ಸರಿಯಾದ ಮಾರ್ಗದರ್ಶನವಿಲ್ಲದಿದ್ದರೆ ಈ ಹಂತಗಳನ್ನು ಓದಿ ತಿಳಿಯಬಹುದೇ ವಿನ: ಅವುಗಳನ್ನು ಅನುಭವಾತ್ಮಕವಾಗಿ ಸಾಧಿಸಲು ಕಷ್ಟ. ಸರಿಯಾದ ಅನುಭವಿ ಗುರುಗಳ ಅಗತ್ಯತೆಯಿದೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಈ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಅದರಲ್ಲಿ ಮೇರುಪರ್ವರಾಗಿ, ಅಗ್ರಗಣ್ಯರಾಗಿ ನಿಲ್ಲುವುದು ಯೋಗಾಂಗ ಶಿಕ್ಷಕ ಚಕ್ರವತರ್ಿ, ಯೋಗಭೀಷ್ಮ ಪಿತಮಾಹ, ಆಧುನಿಕ ಯೋಗದ ಪಿತಾಮಹರಾದ ಪಧ್ಮವಿಭೂಷಣ ಡಾ.ಬಿ.ಕೆ.ಎಸ್. ಅಯ್ಯಂಗಾರ್. ಇವರು ಮಾಡಿದ ಸಾಧನೆ ಅನನ್ಯ, ಅವರು ಮಾಡಿದ ಪ್ರಾಯೋಗಿಕತೆ ಮತ್ತು ಯೋಗದಲ್ಲಿರುವ ವೈಜ್ಞಾನಿಕತೆಯನ್ನು ಹೊರತೆಗೆದು ದೇಶ, ವಿದೇಶಗಳಲ್ಲಿ ಪ್ರಚುರಗೊಳಿಸಿದರು.


ವ್ಯಕ್ತಿಯ ಶರೀರದ ಗುಣಧರ್ಮವನ್ನು ಅರಿತು ಅಭ್ಯಾಸಿಸಬೇಕು. ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯೋಗಗಳನ್ನು ಮಾಡಿ ಎಲ್ಲರಿಗೂ ಅದರ ಅನುಭೂತಿಯನ್ನು ಪ್ರಾಯೋಗಿಕವಾಗಿ ಪಡೆಯಲು ಸಾಧ್ಯವಾಗುತ್ತದೆ. ಆಸನಗಳ ಅನುಕ್ರಮ, ಆಸನಗಳನ್ನು ಸಾಧಿಸುವ ವಿವಿಧ ರೀತಿಯ ವಿಧಾನಗಳು, ವ್ಯಾಧಿಗಳಿಂದ ಬಳಲುತ್ತಿರುವವರು ಪರಿಕರಗಳನ್ನು ಬಳಸಿ ಹೇಗೆ ಗುಣ ಹೊಂದುವರು, ಮಾನಸಿಕ ಹಾಗೂ ದೈಹಿಕ ಸಧೃಡತೆಯನ್ನು ಪಡೆಯಲು ವಿವಿಧ ರೀತಿಯ ಗುಣಧರ್ಮವನ್ನು ಹೊಂದಿದವರು ಅವರಿಗೆ ತಕ್ಕಂತೆ ಸಾಧನೆಯ ವಿಧಾನವನ್ನು ಅನುಭವಪೂರ್ವಕವಾಗಿ ವೈಜ್ಞಾನಿಕ ತಳಹದಿಯಲ್ಲಿ ಭೋಧಿಸಿದ್ದಾರೆ. ಅವರ ಬೋಧಿಸಿದ ವಿಧಾನವು ಈ ಶಿಬಿರದಲ್ಲಿ ನಿಮ್ಮೆಲ್ಲರಿಗೆ ಪರಿಚಯ ಮತ್ತು ಅನುಭವಕ್ಕೆ ಬರುವುದು.


ಯುವಾ ವೃದ್ಧೋ ತಿವೃದ್ಧೋ ವ್ಯಾಧಿತೋ ದುರ್ಬಲೋ ಪಿ ವಾ|

ಅಭ್ಯಾಸಾತ್ ಸಿದ್ಧಿ ಮಾಪ್ನೋತಿ ಸರ್ವಯೋಗೇಷ್ವತಂದ್ರಿತ: ||


ಸತತವಾದ ಅಭ್ಯಾಸದಿಂದ ಯುವಕರು, ವೃದ್ಧರು, ಅತೀ ವೃದ್ಧರು ಅನಾರೋಗ್ಯದವರೂ ಅಥವಾ ದೇಹವಿಕಲರೂ ಯಾರೇ ಆದರೂ ಪರಿಪೂರ್ಣತೆಯನ್ನು ಹೊಂದಬಹುದು. ಸತತವಾದ ಅಭ್ಯಾಸದಲ್ಲಿ ವ್ಯಕ್ತಿಯು ತೊಡಗಿದಾಗ ತನ್ನಲ್ಲಿರುವ ಆಗಾಧ ಶಕ್ತಿಯನ್ನು ತಿಳಿಯುವುದಲ್ಲದೇ ಅವರಲ್ಲಿರುವ ದೈಹಿಕ ಹಾಗೂ ಮಾನಸಿಕ ನ್ಯೂನತೆಗಳ ಅರಿವುಂಟಾಗಿ ಅವುಗಳಿಂದ ಹೊರಬರುವ ಮಾರ್ಗವನ್ನು ಕಂಡುಕೊಳ್ಳಲು ಸಹಾಯಕವಾಗಿದೆ. ಯೋಗದ ವಿಷಯವನ್ನು ತಿಳಿದರೆ ಅಥವಾ ಓದಿದರೆ ಜಯವು ಬರುವುದಲ್ಲ ಅದರ ಸರಿಯಾದ ಕ್ರಮವನ್ನರಿತು ಸಾಧನೆ ಮಾಡಬೇಕು.


ಆಸನಗಳನ್ನು ಮಾಡುವಾಗ ಅನುಕ್ರಮವನ್ನು ತಿಳಿದಾಗ ದೇಹದ ಗಂಟುಗಳು ಹಾಗು ಸ್ನಾಯುಗಳ ಚಲನಾವಲನಗಳನ್ನು ಗಮನಿಸಬೇಕು ಇದರಿಂದ ನಮ್ಮ ನಿತ್ಯ ಚಟುವಟಿಕೆಗಳಲ್ಲಿ ತಪ್ಪು ಭಂಗಿಗಳ ಅರಿವುಂಟಾಗಿ ಅವುಗಳನ್ನು ಸರಿಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಶರೀರದ ಅಂಗಾಂಗಗಳಿಗೆ ಸರಿಯಾದ ರಕ್ತ ಪರಿಚಲನೆಹೊಂದಿ ಅವುಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಆಸನಗಳನ್ನು ಹೇಗೆಂದರೆ ಹಾಗೆ ಮಾಡುವುದಲ್ಲ ಕ್ರಮವನ್ನರಿತು ಮಾಡಿದಾಗ ಅದರ ಪ್ರಯೋಜನಗಳನ್ನು ನಾವು ಪಡೆಯಬಹುದು. ಆಸನಗಳನ್ನು ಮಾಡುವಾಗ ಶರೀರದ ಚಲನೆಯನ್ನು ಅರಿಯಬೇಕು, ಕ್ರಮವನ್ನು ಅರಿತಾಗ ಕಡಿಮೆ ಮತ್ತು ಮಿತಿಮೀರಿದ ಅಭ್ಯಾಸವನ್ನು ತಡೆದು ಸ್ನಾಯುಗಳಲ್ಲಿ ಬಲ ಸಂವರ್ಧನೆಗೊಳ್ಳಲು ಸಹಾಯ ಮಾಡುವುದು.

ಅಲ್ಲದೇ ಶರೀರ ಸ್ನಾಯುಗಳ ಜೋಡಣೆ ಮತ್ತು ಅವುಗಳನ್ನು ಆಸನಗಳಲ್ಲಿ ಹೇಗೆ ಸಂಪರ್ಕ ಮತ್ತು ಸಮನ್ವಯ ಸಾಧಿಸವುದು, ದೇಹದ ಸ್ನಾಯುಗಳು ಮತ್ತು ಉಸಿರಾಟದ ಕ್ರಮ, ಉಸಿರಾಟದ ಪ್ರಕ್ರಿಯೆ ಮತ್ತು ಮನಸ್ಸಿನ ಶಾಂತತೆ ಇವುಗಳಲ್ಲೆವೂ ಒಂದೊಕ್ಕೊಂದು ಹೇಗೆ ಅನುಬಂಧವನ್ನು ಹೊಂದಿವೆ ಎಂದು ಆಸನಗಳಲ್ಲಿ ಅರಿಯಲು ತುಂಬಾ ಸಹಾಯವಾಗುವುದು. ಆಸನಗಳು ಕೇವಲ ದೈಹಿಕ ಚಟುವಟಿಕೆಗಳಲ್ಲ ಅದರೊಟ್ಟಿಗೆ ಪ್ರಾಣ ಮತ್ತು ಮನಸ್ಸನ್ನು ಜೋಡಿಸುವ ಕ್ರಮವನ್ನು ತಿಳಿಯಬೇಕು.


ಯೋಗ ಅಭ್ಯಾಸಿಗಳು ಆರಂಭದಲ್ಲಿ ವಿದ್ಯಾಥರ್ಿಯಾಗಿ ಯೋಗಶಾಲೆಗಳಲ್ಲಿ ಅಥವಾ ಮನೆಯಲ್ಲಿಯೇ ಕೆಲ ಪುಸಕ್ತಗಳನ್ನು ಓದಿ ಆರಂಭಿಸಬಹುದು ಆದರೆ ವಿದ್ಯಾಥರ್ಿಯು ಸಾಧನೆಗೈಯುತ್ತಾ ಸಾಧಕನಾಗಿ ಪರಿವರ್ತನೆಯಾಗಬೇಕಾದರೆ ಅದಕ್ಕೆ ಸರಿಯಾದ ಮನಸ್ಥಿತಿ ಮತ್ತು ಗುರುಗಳ ಅಗತ್ಯವಿರುತ್ತದೆ. ಮನಸ್ಸು ಯೋಗಭ್ಯಾಸಕ್ಕೆ ಅಣಿಯಾದಾಗ ಶರೀರವು ಸಹಕಾರ ಮಾಡದಿರಬಹುದು, ಶರೀರವು ಸಹಕಾರ ಮಾಡುವಂತಿರುವಾಗ ಮನಸ್ಸು ಮಾಡದಿರುವು ಸಹ ಆಗುತ್ತದೆ. ಹೀಗಾಗಿ ತುಂಬಾ ಜನ ಆರೋಗ್ಯದ ಮತ್ತು ಮಾನಸಿಕ ಸಮಸ್ಯೆಯನ್ನು ಎದುರಿಸುತ್ತಾ ಸರಿಯಾದ ದಾರಿ ಸಿಗದೇ ಎಲ್ಲಾ ಪ್ರಯೋಗಗಳನ್ನು ಮಾಡುತ್ತಾ ಕೊನೆಯಲ್ಲಿ ಯೋಗಕ್ಕೂ ಬರುತ್ತಾರೆ ಆದರೆ ಅದಕ್ಕೆ ಮನಸ್ಸು ಸಿದ್ದವಿದ್ದರು ಶರೀರ ಸಹಕರಿಸದೇ ತಮ್ಮನ್ನು ತಾವೇ ಆರೋಪಿಸುತ್ತಾ ಜೀವನವನ್ನು ತಳ್ಳುವವರೂ ಇದ್ದಾರೆ. ಗುರೂಜಿ ಬಿ.ಕೆ.ಎಸ್.ಅಯ್ಯಂಗಾರ ಅವರ ವಿಧಾನದಲ್ಲಿ ಶರೀರದ ಹಾಗು ಮನಸ್ಸಿನ ಆರೋಗ್ಯದ ವಾಸ್ತವ ಸ್ಥಿತಿಯನ್ನು ಅರಿತು ಆಸನಗಳನ್ನು ಹೇಗೆ, ಯಾವ ರೀತಿ ಹಾಗು ಎಷ್ಟು ಮಾಡಬೇಕೆನ್ನುವುದನ್ನು ತಿಳಿಸಿದ್ದಾರೆ. ಪ್ರಾಯೋಗಿಕ ಮತ್ತು ಅನುಭವಿಸುವ ವಿಷಯವಾಗಿರುವುದರಿಂದ ತನ್ನ ಜೀವನ ಶೈಲಿಯಲ್ಲಿ ಯೋಗವು ಹೇಗೆ ಬದಲಾವಣೆಯನ್ನು ತರುತ್ತದೆ ಎನ್ನುವುದು ತಿಳಿಯುವುದಲ್ಲದೇ ಕ್ರಮೇಣವಾಗಿ ಜೀವನದ ಒಂದು ಭಾಗವಾಗಿ ನಂತರದಲ್ಲಿ ಸಾಧಕನಾಗಿ, ಯೋಗಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.


ಈ ಶಿಬಿರದಲ್ಲಿ ಶಿಬಿರಾಥರ್ಿಗಳು ತಮ್ಮ ಜೀವನಕ್ಕೆ ಯೋಗವು ಹೇಗೆ ಅಳವಡಿಸಿಕೊಳ್ಳಬಹುದು, ಯೋಗವು ಜೀವನದ ಒಂದು ಭಾಗವಾಗುವ ಅಗತ್ಯತೆಯ ಅರಿವು ಮೂಡಿಸುವಲ್ಲಿ ಖಂಡಿತವಾಗಿ ಸಹಾಯವಾಗಿದೆಯೆಂದು ನಾವು ಭಾವಿಸುತ್ತೇವೆ. ಸಾಕಷ್ಟು ಶಿಬಿರಾಥರ್ಿಗಳು ಯೋಗದ ಹಾದಿಯನ್ನು ಆರಂಭಿಸಲು, ಆರಂಭಿಸಿದವರಿಗೆ ಅಡೆತಡೆಗಳ ನಿವಾರಣೆಯಾಗುತ್ತಯಲ್ಲದೇ ಸಾಧನೆಯ ಹಾದಿಯನ್ನು ಸುಗಮಗೊಳಿಸಲು ಸರಿಯಾದ ಮಾರ್ಗದರ್ಶನವು ದೊರಕಿದೆ.




 
 
 

Comentários


  • Instagram
  • Facebook
  • YouTube

2025 by Yogasree Iyengar Yoga center

©

bottom of page