“ಆರಂಭಾವಸ್ಥೆಗೊಂದು ಯೋಗ ಪಥ” ಪುಸ್ತಕದ ಒಳನೋಟ
- yogasreeiycinfo
- May 24, 2024
- 1 min read
ಯೋಗವನ್ನು ಈಗಾಗಲೇ ಅಭ್ಯಾಸ ಮಾಡುತ್ತಿರುವವರು, ಇನ್ನೂ ಶುರು ಮಾಡಬೇಕು ಎಂದುಕೊಂಡಿರುವವರು, ಅಭ್ಯಾಸಕ್ಕೆ ಇಚ್ಛೆಯಿದೆ ಆದರೆ ವಯಸ್ಸು, ಅನಾರೋಗ್ಯದ ಭಯ ಇರುವವರು ಸಹ ಈ ಪುಸ್ತಕವನ್ನು ಓದಿ ಯೋಗದ ಅಭ್ಯಾಸವನ್ನು ಆರಂಭಿಸಲು ಯಾವುದೇ ಭಯ ಮತ್ತು ಅಡ್ಡಿಯಿಲ್ಲ. ಜಗದ್ವಿಖ್ಯಾತ ಯೋಗಗುರುಗಳಾದ ಪದ್ಮ ವಿಭೂಷಣ ಶ್ರೀ ಬಿ.ಕೆ.ಎಸ್ ಅಯ್ಯಂಗಾರ್ ಅವರ ಗರಡಿಯಲ್ಲಿ ಅಭ್ಯಾಸಮಾಡಿ, ಶಿಕ್ಷಕರಾದ ಶ್ರೀ ವಿರೂಪಾಕ್ಷ ಡಾಣಿಯವರು ಅವರ ಯೋಗಕೇಂದ್ರದ ದಶಮಾನತ್ಸವದ ಸಂದಂರ್ಭಕ್ಕೆ ಹೊರ ತಂದ ಈ ಪುಸ್ತಕವು ಸುಮಾರು 300 ಕ್ಕೂ ಹೆಚ್ಚು ಆಸನಗಳ ಚಿತ್ರಗಳನ್ನು ಒಳಗೊಂಡಿದ್ದು, ಅವುಗಳಿಗೆ ಸರಿಯಾದ ವಿವರಣೆ, ಮತ್ತು ಅನುಸರಿಸಬೇಕಾದ ವಿಧಾನ ಹಾಗೂ ಅವುಗಳ ಪರಿಣಾಮವನ್ನು ವಿವರಿಸಿದ್ದಾರೆ.

ಪುಸ್ತಕದಲ್ಲಿನ ವಿಶೇಷತೆಗಳು:
ಸರಳವಾದ ಕನ್ನಡದಲ್ಲಿ ನಿತ್ಯವೂ ಮಾತನಾಡುವ ಸಹಜ ಬಾಷೆಯಲ್ಲಿದೆ.
ಯೋಗ ಎಂದರೇನು? ಯೋಗದ ಹಂತಗಳಾದ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ. ಇವುಗಳ ಸರಳವಾದ ವಿವರೆಣೆಯಿದ್ದು, ಅವುಗಳನ್ನು ಅಭ್ಯಾಸಕರು ಸಾಧನೆಯಲ್ಲಿ ಅಳವಡಿಸಿಕೊಳ್ಳುವ ಬಗೆಯನ್ನು ವಿವರಿಸಿದ್ದಾರೆ.
ಆಸನಗಳನ್ನು ಮಾಡುವ ಮುನ್ನ ಮತ್ತು ಅಭ್ಯಾಸಿಸುವಾಗ ಗಮನಿಸಬೇಕಾದ ಸಂಗತಿಗಳನ್ನು ತಿಳಿಸಿದ್ದಾರೆ.
ಆರೋಗ್ಯದ ದೃಷ್ಟಿಯಿಂದ ಅಭ್ಯಾಸದ ಬಗೆಯನ್ನು ತಿಳಿಸಿದ್ದಾರೆ. ಅಲ್ಲದೇ ಮಹಿಳೆಯರು ಋತುಸ್ರಾವ, ಗರ್ಭಿಣಿ ಮತ್ತು ಮುಟ್ಟು ನಿಲ್ಲುವ ಕಾಲದಲ್ಲಿನ ಅಭ್ಯಾಸದ ವಿಧಾನವನ್ನು ತಿಳಿಸಿದೆ.
ಪ್ರತಿಯೊಬ್ಬರ ಶರೀರದ ಗುಣಧರ್ಮ ಬೇರೆಯಾಗಿರುತ್ತದೆ. ಅದನ್ನು ಅನುಸರಿಸಿ ಅಭ್ಯಾಸಕ್ಕೆ ಹೆಚ್ಚು ಹೊತ್ತು ನೀಡಿದೆ.
300 ಕ್ಕೂ ಹೆಚ್ಚು ಆಸನಗಳ ಬಣ್ಣದ ಚಿತ್ರಗಳಿದ್ದೂ ಪ್ರತಿಯೊಂದು ಆಸನದ ಸ್ಥಿತಿಯ ಆರಂಭ ಮತ್ತು ಪೂರ್ಣಸ್ಥಿತಿ ಅಲ್ಲದೇ ಪರಿಕರಗಳ ಸಹಾಯದೊಂದಿಗಿನ ಆಸನಗಳ ಚಿತ್ರವಿದ್ದು ಸುಲಭವಾಗಿ ಗಮನಿಸಿ ಅಭ್ಯಾಸಿಸಬಹುದು.
ಅಯ್ಯಂಗಾರ್ ಯೋಗದ ವಿಶೇಷತೆಯೆಂದರೆ ಆಸನಗಳ ಮಾಡುವ ವಿಧಾನ, ಕ್ರಮ ಹಾಗೂ ಸಮಯ ಮತ್ತು ಪರಿಕರಗಳನ್ನು ಬಳಸಿ ಸುಲಭವಾಗಿ ಮಾಡುವುದಾಗಿದೆ. ಎಲ್ಲಾ ವಯೋಮಾನದರಿಗೂ ಸರಿ ಹೊಂದುವಂತೆ ಹಂತ ಹಂತದ ಅಭ್ಯಾಸದ ವಿಧಾನವನ್ನು ಚಿತ್ರಗಳ ಸಮೇತ ತೋರಿಸಿದೆ.
ಆಸನಗಳಿಗೆ ಸರಿಯಾದ ಅಭ್ಯಾಸದ ವಿಧಾನ ಮತ್ತು ಕ್ರಮಗಳನ್ನು ಹಂತ ಹಂತವಾಗಿ ಸಾಧಕನು ಆಸನದ ಪೂರ್ಣಸ್ಥಿತಿಯನ್ನು ಗಳಿಸುವುದು ಹೇಗೆ ಎನ್ನುವುದನ್ನು ವಿವರಿಸಿದೆ.
ಆರೋಗ್ಯ ಮತ್ತು ಶರೀರದ ಗುಣದ ಆಧಾರದ ಮೇಲೆ ಅಭ್ಯಾಸಿಗಳು ತೆಗೆದುಕೊಳ್ಳಬೇಕಾದ ಎಚ್ಚರಿಕೆ ಮತ್ತು ಜಾಗರೂಕ ಸೂಚನೆಗಳನ್ನು ಸಹ ವಿವರಿಸಿದೆ.
ಆಸನಗಳ ಅಭ್ಯಾಸಕ್ಕೆ ಆಸನಗಳ ಅಭ್ಯಾಸಕ್ರಮ(Sequence)ಪಟ್ಟಿಯನ್ನು ಸಹ ಒಳಗೊಂಡಿರುವುದು ವಿಶೇಷದ ಸಂಗತಿ. ಇದು ಆಸನಗಳ ಅಭ್ಯಾಸಕ್ಕೆ ಸುಲಭವಾಗುತ್ತದೆ.
ಈ ಪುಸ್ತಕವು ಯೋಗಭ್ಯಾಸಿಗಳಿಗೆ ಉತ್ತಮ ಕೈಪಿಡಿಯಾಗಿದೆ. ಯೋಗದ ಅಭ್ಯಾಸದಿಂದ ಶಾರೀರಿಕ ಮತ್ತು ಮಾನಸಿಕ ಆರೋಗ್ಯವನ್ನು ಪಡೆದು ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಸಹಾಯ ಮಾಡುವುದಲ್ಲದೇ ಆರೋಗ್ಯಯುತ ಸಮಾಜದ ನಿರ್ಮಾಣಕ್ಕೆ ಸಹಾಯವಾಗುತ್ತದೆ. ಈ ಪುಸ್ತಕವನ್ನು ಓದಿ, ಓದಿಸಿ, ಯೋಗಾಸಕ್ತರಿಗೂ ತಿಳಿಸಿ ಅದರ ಉಪಯೋಗವನ್ನು ಎಲ್ಲರೂ ಪಡೆಯುವಂತಾದರೆ ಯೋಗಕೇಂದ್ರದ ಶ್ರಮವು ಸಾರ್ಥಕವೆನಿಸುವುದು.
ಧನ್ಯವಾದಗಳು.
ಪುಸ್ತಕಗಳಿಗಾಗಿ ಸಂಪರ್ಕಿಸಿ: 9535559752
ಅಮೆಜಾನ್‌ನಲ್ಲೂ ಸಹ ಖರೀಧಿಸಬಹುದು: https://amzn.in/d/f5hdQZ7
ಯೋಗಶ್ರೀ ಅಯ್ಯಂಗಾರ್ ಯೋಗ ಕೇಂದ್ರ
3ನೇ ಅಡ್ಡರಸ್ತೆ, ಗಾಂಧಿನಗರ
, ಬಳ್ಳಾರಿ.


Comments